ಜೆಟ್ ಲಿ (ಹುಟ್ಟಿದ ದಿನಾಂಕ: ೨೬ ಏಪ್ರಿಲ್ ೧೯೬೩) ಎಂಬ ಹೆಸರಿನಿಂದ ಖ್ಯಾತವಾಗಿರುವ ಲಿ ಲಿಯಾಂಜಿ ಒಬ್ಬ ಚೀನೀ ಸಿನೆಮಾ ನಟ, ನಿರ್ಮಾಪಕ, ಮಾರ್ಶಲ್ ಕಲಾವಿದ ಮತ್ತು ನಿವೃತ್ತ 'ವುಶು' ಪಟು. ಅವರೊಬ್ಬರು ಸಿಂಗಾಪುರ ದೇಶದ ನಾಗರೀಕರರೂ ಆಗಿದ್ದಾರೆ. ( ಮೂಲಕ). ವು ಬಿನ್ ಅವರ ಮೂರು ವರ್ಷಗಳ ಪರಿಶ್ರಮದ ತರಬೇತಿಯ ನಂತರ ಜೆಟ್ ಲಿ ಬೀಜಿಂಗ್ ವುಶು ತಂಡಕ್ಕಾಗಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಪಡೆದರು. ೧೯ನೇ ವಯಸ್ಸಿನಲ್ಲಿ ವುಶು ಆಟದಿಂದ ನಿವೃತ್ತಿ ಪಡೆದು ಸಿನೆಮಾ ರಂಗ ಪ್ರವೇಶಿಸಿದರು. ಮೊದಲ ಸಿನೆಮಾ 'ಶಾವೊಲಿನ್ ಟೆಂಪಲ್' (೧೯೮೨ ಇಸವಿ). ಝಾಂಗ್ ಯಿಮೋ ನಿರ್ದೇಶನದ ೨೦೦೧ ಹೀರೋ ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಚೀನಾ ಸರಣಿಯಲ್ಲಿ ವೊಂಗ್ ಫೇ-ಹುಂಗ್ ಎಂಬ ಹೆಸರಿನ ಜಾನಪದ ನಾಯಕನಾಗಿ ಪ್ರಮುಖ ಪಾತ್ರದಲ್ಲಿ ನಟಿಸಿ ಪ್ರಸಿದ್ಧಿಯಾಗಿದ್ದಾರೆ. ಮಾರ್ಶಲ್ ಕಲೆಯನ್ನು ತೋರಿಸುವ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. 'ಲಿ'ಯವರ ಮೊದಲ ಚೀನೀಯೇತರ ಸಿನೆಮಾ ೧೯೯೮ರಲ್ಲಿ ಬಿಡುಗಡೆಯಾದ ಲಿದಲ್ ವೆಪನ್ ೪. ಇದರಲ್ಲಿ ಖಳನಾಯಕನಾಗಿ ನಟಿಸಿದ್ದರು. ಮುಖ್ಯಪಾತ್ರದಲ್ಲಿ ನಟಿಸಿದ ಮೊದಲ ಹಾಲಿವುಡ್ ಚಿತ್ರ ರೋಮಿಯೋ ಮಸ್ಟ್ ಡೈ (೨೦೦೧ ಇಸವಿ, ಹಾನ್ ಸಿಂಗ್ ಪಾತ್ರ). ಅವರು ಅನೇಕ ಆಕ್ಷನ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಿಸ್ ಆಫ್ ದ ಡ್ರಾಗನ್ ಮತ್ತು ಅನ್ ಲೀಶ್‍ಡ್ ಎಂಬ ಫ್ರೆಂಚ್ ಸಿನೆಮಾಗಳಲ್ಲೂ ನಟಿಸಿದ್ದಾರೆ. ದ ಒನ್ (೨೦೦೧) ಸಿನೆಮಾದಲ್ಲಿ ಸಹನಟನಾಗಿ ಜಾಕಿ ಚಾನ್‌ ಜೊತೆ 'ದ ಫಾರ್‍ಬಿಡನ್ ಕಿಂಗ್‍ಡಂ' (೨೦೦೮), ಸಿಲ್ವಿಸ್ಟರ್ ಸ್ಟಲ್ಲೋನ್ ನ 'ಎಕ್ಸ್ ಪ್ಯಾಂಡೇಬಲ್' ಸರಣಿಯಲ್ಲಿ ಮತ್ತು 'ಮಮ್ಮಿ: ಟೂಂಬ್ ಆಫ್ ದ ಡ್ರಾಗನ್ ಎಂಪೆರರ್' (೨೦೦೮) ಸಿನೆಮಾದಲ್ಲಿ ಪ್ರಮುಖ ಖಳನಟನಾಗಿಯೂ ನಟಿಸಿದ್ದಾರೆ. == ಸಿನೆಮಾ ಜೀವನ == === ಜೆಟ್ ಲಿ ನಟಿಸಿದ ಸಿನೆಮಾಗಳು === === ಡಾಕ್ಯುಮೆಂಟರಿಗಳು === === ವಿಡಿಯೋ ಗೇಮ್ === == ಉಲ್ಲೇಖಗಳು == == ಹೊರಸಂಪರ್ಕಗಳು == ಜೆಟ್ ಲಿ ಅಧಿಕೃತ ಜಾಲತಾಣ 2011-02-24 ವೇಬ್ಯಾಕ್ ಮೆಷಿನ್ ನಲ್ಲಿ. ಜೆಟ್ ಲಿ ಪುಟ, ಐ ಎಮ್ ಡಿ ಬಿ ತಾಣ